ಮೈಕೆಲ್ ಕೆವಿನ್ ಪೊಲನ್ ಜನನ ಫೆಬ್ರವರಿ 6, 1955) ಒಬ್ಬ ಅಮೇರಿಕಾದ ಲೇಖಕರು ಹಾಗೂ ಪತ್ರಕರ್ತರು. ಇವರು ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುತ್ತಾರೆ . ಏಕಕಾಲದಲ್ಲಿ, ಯುಸಿ ಬರ್ಕ್ಲಿ ಪದವಿ ಪತ್ರಿಕೋದ್ಯಮ ಶಾಲೆಯ ವಿಜ್ಞಾನ ಹಾಗು ಪರಿಸರ ಪತ್ರಿಕೋದ್ಯಮದ ಪ್ರಾಧ್ಯಾಪಕ, ಮತ್ತು ನಿರ್ದೇಶಕರಾಗಿದ್ದಾರೆ. ಅಲ್ಲಿ ಅವರು 2020 ರಲ್ಲಿ ಯುಸಿ ಬರ್ಕ್ಲಿ ಸೈಡಲ್ಲಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಈ ವಿಭಾಗದಲ್ಲಿ ಅವರು ಸಾರ್ವಜನಿಕ ಶಿಕ್ಷಣ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ. ಪೋಲನ್ ಅವರು ಆಹಾರದ ಸಾಮಾಜಿಕ-ಸಾಂಸ್ಕೃತಿಕ ಪರಿಣಾಮಗಳನ್ನು ಅನ್ವೇಷಿಸುವ ಪುಸ್ತಕಗಳಿಗೆ ಹೆಸರುವಾಸಿಯಾಗಿದ್ದಾರೆ, ಉದಾಹರಣೆಗೆ ದಿ ಬಾಟನಿ ಆಫ್ ಡಿಸೈರ್ ಮತ್ತು ದಿ ಓಮ್ನಿವೋರ್ಸ್ ಡೈಲೆಮಾ . == ಜೀವನ == ಪೋಲನ್ ಅವರು ನ್ಯೂಯಾರ್ಕ್ನ ಲಾಂಗ್ ಐಲ್ಯಾಂಡ್ನಲ್ಲಿ ಒಂದು ಯಹೂದಿ ಕುಟುಂಬದಲ್ಲಿ ಜನಿಸಿದರು. ಅವರು ಲೇಖಕ ಮತ್ತು ಹಣಕಾಸು ಸಲಹೆಗಾರರಾದ ಸ್ಟೀಫನ್ ಪೊಲನ್ ಮತ್ತು ಅಂಕಣಕಾರ ಕಾರ್ಕಿ ಪೋಲನ್ ಅವರ ಮಗ ಆಕ್ಸ್‌ಫರ್ಡ್‌ನ ಮ್ಯಾನ್ಸ್‌ಫೀಲ್ಡ್ ಕಾಲೇಜ್‌ನಲ್ಲಿ 1975 ರ ವರೆಗೆ ಅಧ್ಯಯನ ಮಾಡಿದ ನಂತರ, ಪೊಲನ್ 1977 ರಲ್ಲಿ ಬೆನ್ನಿಂಗ್ಟನ್ ಕಾಲೇಜಿನಿಂದ ಇಂಗ್ಲಿಷ್‌ನಲ್ಲಿ ಬಿಎ ಪದವಿ ಮತ್ತು 1981 ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಎಂಎ ಸ್ನಾತಕೋತ್ತರ ಪದವಿ ಪಡೆದರು. == ಉಲ್ಲೇಖಗಳು ==